ಕಾಕೇಸಿಯನ್ ಭಾಷಾ ಪರಿವಾರ

  ಇದು ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ಮಧ್ಯ ಭಾಗದಲ್ಲಿ ಇರುವ ಬಹು ವಿಶಾಲವಾದ ಕಾಕೇಸಿಯ ಪ್ರದೇಶದಲ್ಲಿ ವಾಸಿಸುವ ಜನ ಆಡುತ್ತಿರುವ ವಿವಿಧ ಭಾಷೆಗಳ ಒಂದು ಸಮೂಹ. ಈ ಭಾಷಾಕ್ಷೇತ್ರ ರಷ್ಯದ ದಕ್ಷಿಣದಲ್ಲಿ ಕಾಕೇಸಿಯನ್ ಭೂಸಂಧಿಯಿಂದ ಮೊದಲಾಗಿ ತುರ್ಕಿ ಮತ್ತು ಇರಾನ್ ದೇಶಗಳವರೆಗೂ ಹರಡಿಕೊಂಡಿದೆ. ಈ ವಿಶಾಲವಾದ ಭೂಪ್ರದೇಶದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಜನ ಈ ಭಾಷೆಗಳನ್ನು ಬಳಸುತ್ತಿದ್ದಾರೆ. ಈ ಭಾಷಾಪರಿವಾರಕ್ಕೆ ಸೇರಿದ ಹೆಚ್ಚು ಉಪಭಾಷೆಗಳು ಕಾಕಸಸ್ ಪರ್ವತದ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ದೊರೆಯುತ್ತವೆ. ಈ ಎಲ್ಲ ಭಾಷೆ ಮತ್ತು ಉಪಭಾಷೆಗಳನ್ನು ಅಧ್ಯಯನ ಮಾಡಲು ಹೊರಟಾಗ ಅವು ಪರಸ್ಪರ ಭಿನ್ನ ಭಿನ್ನವಾಗಿಯೇ ಕಂಡುಬಂದಿವೆ. ಈ ಕಾರಣಗಳಿಂದಾಗಿ ಇವು ವಿಶ್ವದ ಯಾವ ಭಾಷಾ ಪರಿವಾರಕ್ಕೂ ಸೇರದೆ ಒಂದು ಸ್ವತಂತ್ರಭಾಷಾಪರಿವಾರವಾಗಿಯೇ ಉಳಿದಿವೆ. ಇವು ಪ್ರಾಚೀನ ಮೆಡಿಟರೇನಿಯನ್ ಭಾಷೆಗಳ ಪಳೆಯುಳಿಕೆಗಳಿಂದ ವಿಕಾಸಗೊಂಡ ಭಾಷೆಗಳಿರಬೇಕೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಹೆಚ್ಚಿನ ವಿಚಾರಗಳನ್ನು ತಿಳಿಯಲು ಸಾಕಷ್ಟು ಪ್ರಮಾಣಗಳು ಇಲ್ಲದೆ ಇವು ಇನ್ನೂ ಅಸ್ಪಷ್ಟವಾಗಿಯೇ ಉಳಿದಿವೆ. ಈ ಬಗ್ಗೆ ಇನ್ನೂ ಸಂಶೋಧನೆ ನಡೆಯಬೇಕಾಗಿದೆ.

 ಕಾಕೇಸಿಯನ್ ಭಾಷಾಪರಿವಾರಕ್ಕೆ ಸೇರಿದ ಭಾಷೆಗಳನ್ನು ಮುಖ್ಯವಾಗಿ ಮೂರು ವರ್ಗಗಳನ್ನಾಗಿ ವಿಂಗಡಿಸಬಹುದು:

 1 ಪೂರ್ವ ಕಾಕೇಸಿಯನ್ ಭಾಷಾವರ್ಗ: (1) ಚೆಚೆನ್ (ಅheಛಿheಟಿ) (2) ಅವ್ರೊ-ಅಂದಿ (ಂvಚಿಡಿo-ಂಟಿಜi) (3) ದರ್ಘಿ (ಆಚಿಡಿghi) (4) ಸಮುರ್ (Sಚಿmuಡಿ) (5) ಲಕ್ ಅಥವಾ ಕಸಿ-ಕುಮುಕ್ (ಐಚಿಞಞ oಡಿ ಏಚಿsi-ಏumuಞ) (6) ಅರ್ತ್ಜಿ (ಂಡಿಣಛಿhi) (7) ಹಿನುಲುಘ್ (ಊiಟಿಚಿಟug) (8) ಉದಿ (Uಜi) ಎಂಬ ಎಂಟು ಭಾಷಾಶಾಖೆಗಳು ಸೇರಿವೆ.

 2 ಪಶ್ಚಿಮ ಕಾಕೇಸಿಯನ್ ಭಾಷಾವರ್ಗ: (1) ಅಭಜóó (ಂbhಚಿz) (2) ಉಭಿಕ್ (Ubಥಿಞh) (3) ಅದಿಘೆ (ಂಜಥಿghe) ಎಂಬ ಮೂರು ಭಾಷಾ ಶಾಖೆಗಳು ಸೇರಿವೆ.

 3 ದಕ್ಷಿಣ ಕಾಕೇಸಿಯನ್ ಭಾಷಾವರ್ಗ: (1) ಜಾರ್ಜಿಯಸ್ (ಉeoಡಿgiಚಿಟಿ) (2) ಮಿಂಗ್ರೆಲಿಯನ್ ಮತ್ತು ಲeóï (ಒiಟಿgಡಿeಟiಚಿಟಿ ಚಿಟಿಜ ಐಚಿz) (3)ಸ್ವನೇತಿಯನ್ (Svಚಿಟಿeಣiಚಿಟಿ) ಎಂಬ ಭಾಷಾಶಾಖೆಗಳು ಸೇರಿವೆ.

 ಈ ಭಾಷಾವರ್ಗೀಕರಣವನ್ನು ಸಮರ್ಪಕ ಹಾಗು ಪರಿಪೂರ್ಣ ಎಂದು ಒಪ್ಪದ ಕೆಲವು ವಿದ್ವಾಂಸರು ಈ ವರ್ಗದ ಕೆಲವು ಭಾಷೆಗಳನ್ನು ಆಳವಾಗಿ ಅಧ್ಯಯನ ಮಾಡಿ ಅವುಗಳಲ್ಲಿ ಮುಖ್ಯವಾಗಿ ಕಂಡುಬರಬಹುದಾದ ಸಾಮ್ಯಗಳನ್ನು ಆಧಾರವಾಗಿರಿಸಿಕೊಂಡು ಅವನ್ನು ಮತ್ತೆ ವರ್ಗೀಕರಿಸತೊಡಗಿದರು. ಪೂರ್ವ ಮತ್ತು ಪಶ್ಚಿಮ ಕಾಕೇಸಿಯನ್ ಭಾಷೆಗಳಲ್ಲಿ ಸಾಕಷ್ಟು ಸಾಮ್ಯ ಕಂಡು ಬಂದ ಕಾರಣದಿಂದ ಅವನ್ನು ಒಟ್ಟುಗೂಡಿಸಿ ಉತ್ತರ ಕಾಕೇಸಿಯನ್ ಭಾಷಾವರ್ಗವೆಂದು ಕರೆದರು. ಅಂದಿನಿಂದ ಈ ಕಾಕೇಸಿಯನ್ ಭಾಷಾಪರಿವಾರಕ್ಕೆ ಸೇರಿದ ಎಲ್ಲ ಭಾಷೆಗಳನ್ನೂ ಉತ್ತರ ಮತ್ತು ದಕ್ಷಿಣ ಕಾಕೇಸಿಯನ್ ಭಾಷಾವರ್ಗಗಳೆಂದು ಕರೆಯುವುದು ರೂಢಿಗೆ ಬಂತು. ಉತ್ತರ ಕಾಕೇಸಿಯನ್ ಭಾಷೆಗಳಾದ ಪೂರ್ವ ಮತ್ತು ಪಶ್ಚಿಮ ಕಾಕೇಸಿಯನ್ ಭಾಷೆಗಳು ದಕ್ಷಿಣ ಕಾಕೇಸಿಯನ್ ಭಾಷೆಗಳೊಡನೆ ಹೋಲಿಸಿದಾಗ ಪರಸ್ಪರ ಭಿನ್ನವಾಗಿಯೇ ಕಂಡುಬರುತ್ತವೆ.

 ಉತ್ತರ ಕಾಕೇಸಿಯನ್ ಭಾಷೆಗಳ ಬಹು ಮುಖ್ಯ ವೈಶಿಷ್ಟ್ಯವೆಂದರೆ ಅವುಗಳಲ್ಲಿ ಸ್ವರಗಳು ಕಡಿಮೆ ಇದ್ದು ವ್ಯಂಜನಗಳು ಹೆಚ್ಚಾಗಿರುವುದು. ಅದರಲ್ಲೂ ಪಾಶ್ರ್ವಿಕ ವ್ಯಂಜನಗಳೇ ಅಧಿಕ. ಪೂರ್ವ ಮತ್ತು ಪಶ್ಚಿಮ ಕಾಕೇಸಿಯನ್ ಭಾಷೆಗಳನ್ನೇ ಪರಸ್ಪರ ಹೋಲಿಸಿದಾಗ ಪಶ್ಚಿಮ ಕಾಕೇಸಿಯನ್ ಭಾಷೆಗಳಲ್ಲಿ ವ್ಯಂಜನಯುಗ್ಮಗಳು ಅಧಿಕವಾಗಿ ಕಂಡುಬರುತ್ತವೆ. ಪೂರ್ವ ಕಾಕೇಸಿಯನ್ ಭಾಷೆಗಳಲ್ಲಿ ಇಂಥ ವ್ಯಂಜನಯುಗ್ಮಗಳು ಕಂಡುಬಂದರೂ ಅತಿ ಕಡಿಮೆ. ಕೆಲವು ಸಂದರ್ಭಗಳಲ್ಲಿ ಇಂಥ ವ್ಯಂಜನಯುಗ್ಮಗಳನ್ನು ಪರಕೀಯನೊಬ್ಬ ಸುಲಭವಾಗಿ ಉಚ್ಚರಿಸಲಾರ. ಇಂಥ ವ್ಯಂಜನಸಮುದಾಯ ಅಧಿಕವಾಗಿ ಕಂಡುಬರುವುದು ಈ ವರ್ಗದ ಭಾಷೆಗಳ ಬಹುಮುಖ್ಯ ಲಕ್ಷಣಗಳಲ್ಲಿ ಒಂದು. ಮತ್ತೊಂದು ಮುಖ್ಯ ವೈಶಿಷ್ಟ್ಯವೇನೆಂದರೆ ಈ ಎಲ್ಲ ಭಾಷೆಗಳಲ್ಲೂ ವಿಭಕ್ತಿಪ್ರತ್ಯಯಗಳಿಗಿರುವ ಪ್ರಾಧಾನ್ಯ. ಕೆಲವು ಭಾಷೆಗಳಲ್ಲಿ ಈ ವಿಭಕ್ತಿಗಳ ಸಂಖ್ಯೆ 35ಕ್ಕೂ ಹೆಚ್ಚಿರಬಹುದು. ಈ ಭಾಷೆಗಳ ಪದರಚನಾಕ್ರಮವೂ ವಿಚಿತ್ರ ಹಾಗು ತುಂಬ ಕ್ಲಿಷ್ಟ. ಅದೂ ಅಲ್ಲದೆ, ವಿಶೇಷ್ಯ ಸೂಚಕ ರೂಪಗಳು ಈ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಲಿಂಗ, ವಚನ, ವಿಭಕ್ತಿಗಳಲ್ಲಿ ಈ ವಿಶೇಸ್ಯ ಸೂಚಕ ರೂಪಗಳು ಯಾವ ವರ್ಗಕ್ಕೆ ಸೇರಿವೆ ಎಂಬುದನ್ನು ರೂಪದಿಂದಾಗಲಿ ಅರ್ಥದಿಂದಾಗಲಿ ಹೇಳಲು ಬರುವುದಿಲ್ಲ. ಕೆಲವು ವೇಳೆ, ಒಂದೇ ಒಂದು ವಿಶೇಷ್ಯ ಸೂಚಕರೂಪ ಏಕವಚನ ಮತ್ತು ಬಹುವಚನಗಳೆರಡರಲ್ಲೂ ಒಂದೇ ಆಗಿ ಕಾಣಿಸಿಕೊಂಡು ಭಿನ್ನ ಭಿನ್ನ ಅರ್ಥವನ್ನು ಸೂಚಿಸುತ್ತದೆÉ. ಹಾಗೆಯೇ ಅದು ವಿವಿಧ ಲಿಂಗಗಳನ್ನೂ ಸೂಚಿಸಬಲ್ಲುದು. ಕೆಲವು ಸಂದರ್ಭಗಳಲ್ಲಿ ವಿಶೇಷ್ಯ ಸೂಚಕ ರೂಪಗಳ ಪರ, ಮಧ್ಯ ಅಥವಾ ಅಂತ್ಯದಲ್ಲಿ ವಿವಿಧ ವ್ಯಂಜನಗಳನ್ನು ಪ್ರತ್ಯಯದ ರೂಪದಲ್ಲಿ ಉಪಯೋಗಿಸಿದಾಗ ಆ ರೂಪಗಳು ಭಿನ್ನ ಭಿನ್ನವಾಗಿ ಕಾಣಿಸಿಕೊಂಡು ಬೇರೆ ಬೇರೆ ಅರ್ಥವನ್ನು ವ್ಯಕ್ತಪಡಿಸುತ್ತವೆ. ಈ ವಿಶೇಷ್ಯ ಸೂಚಕ ರೂಪಗಳ ಸಂಖ್ಯೆ ಕೆಲವು ಭಾಷೆಗಳಲ್ಲಿ ಎರಡರಿಂದ ಆರರವರಿಗೆ ಕಂಡುಬರುತ್ತವೆ ಈ ಭಾಷೆಗಳ ಮತ್ತೊಂದು ಲಕ್ಷಣವೇನೆಂದರೆ ವಿಶೇಷಣ, ಕ್ರಿಯಾಪದ, ಸರ್ವನಾಮ ಅಥವಾ ಕ್ರಿಯಾವಿಶೇಷಣ ಗಳಿಗೆ ಮೇಲೆ ಹೇಳಿದಂತೆ ವಿವಿಧ ವ್ಯಂಜನಗಳನ್ನು ಪ್ರತ್ಯಯರೂಪದಲ್ಲಿ ಸೇರಿಸಿದಾಗ ಬೇರೆ ಬೇರೆ ಅರ್ಥವನ್ನು ಸೂಚಿಸಿ ಅವು ಲಿಂಗ, ವಚನ, ವಿಭಕ್ತಿಗಳ ಕಾರ್ಯವನ್ನು ನಿರ್ವಹಿಸುತ್ತವೆ. ಇಂಥ ಪದರಚನಾಕ್ರಮದಲ್ಲಿ ಅವುಗಳ ಮೂಲರೂಪವನ್ನು ಸುಲಭವಾಗಿ ಪತ್ತೆ ಹಚ್ಚಲು ಬರುವುದಿಲ್ಲ. ಈ ಭಾಷೆಗಳಲ್ಲಿ ಸಾಮಾನ್ಯ ಕ್ರಿಯಾಮೂಲ ರೂಪ ಒಂದೇ ವ್ಯಂಜನ ಉಳ್ಳದ್ದಾಗಿರುವುದು ಹೆಚ್ಚು. ಈ ವಿವಿಧ ಕ್ರಿಯಾರೂಪಗಳ ಹಿಂದೆ ಅಥವಾ ಮುಂದೆ ಅನೇಕ ಪ್ರತ್ಯಯಗಳು ಬರುತ್ತವೆ. ಅಂಥ ಸಂದರ್ಭದಲ್ಲಿ ಮೂಲರೂಪಕ್ಕೂ ಈ ಹೊಸ ರೂಪಕ್ಕೂ ರಚನಾಕ್ರಮದಲ್ಲಿ ಸಂಬಂಧವೇ ಗೋಚರವಾಗುವುದಿಲ್ಲ. ಇಂಥ ಕ್ಲಿಷ್ಟತೆಗಳ ಕಾರಣದಿಂದಾಗಿ ಕಾಕೇಸಿಯನ್ ಭಾಷೆಗಳ ವ್ಯಾಕರಣ ಬಹಳ ಸಂಕೀರ್ಣ ಹಾಗು ಜಟಿಲವಾಗಿ ಕಂಡುಬರುತ್ತದೆ.

 ಪಶ್ಚಿಮ ಕಾಕೇಸಿಯನ್ ಭಾಷೆಗಳಲ್ಲಿ ವಿಭಕ್ತಿಗಳು ಬಹಳ ಕಡಿಮೆ. ಅದಿಘೆ, ಉದಿಕ್ ಭಾಷೆಗಳಲ್ಲಿ ಮುರೇ ಮೂರು ವಿಭಕ್ತಿಗಳು ಕಂಡುಬರುತ್ತವೆ. ಅಭeóï ಭಾಷೆಯಲ್ಲಿ ವಿಭಕ್ತಿಗಳೇ ಇಲ್ಲ. ಇಲ್ಲಿ ಪೂರ್ವಕಾಕೇಸಿಯನ್ ಭಾಷೆಗಳಿಗಿಂತ ಕ್ರಿಯಾರೂಪಗಳು (ಮೂಲಧಾತು) ಕಡಿಮೆ. ಸಮಾಸಪದಗಳೇ ಹೆಚ್ಚು. ಸಾಮಾನ್ಯ ಮೂಲಪದಗಳೂ ಬಹಳ ಕಡಿಮೆ. ಈ ಕಾರಣದಿಂದ ಸಮಾಸಪದಗಳೇ ವಿವಿಧ ವಿಚಾರಗಳ ಅರ್ಥವನ್ನು ವ್ಯಕ್ತಪಡಿಸುತ್ತವೆ. ಈ ರೀತಿಯ ವ್ಯತ್ಯಾಸವಿದ್ದರೂ ಪೂರ್ವ ಮತ್ತು ಪಶ್ಚಿಮ ಕಾಕೇಸಿಯನ್ ಭಾಷೆಗಳ ಪದಸಮೂಹದಲ್ಲಿ ಸಾಮ್ಯವಿದೆ. ಸರ್ವನಾಮ, ಕ್ರಿಯಾಪದ, ಸಂಖ್ಯಾವಾಚಕ ಮತ್ತು ಇತರ ಪದಗಳಲ್ಲಿ ಸರಳತೆ ಹೆಚ್ಚು..

 ದಕ್ಷಿಣ ಕಾಕೇಸಿಯನ್ ಭಾಷೆಗಳ ಧ್ವನಿವ್ಯವಸ್ಥೆ ಉತ್ತರ ಕಾಕೇಸಿಯನ್ ಭಾಷೆಗಳ ಧ್ವನಿವ್ಯವಸ್ಥೆಗಿಂತ ತುಂಬ ಸರಳ. ಇಲ್ಲಿ ಪ್ರತ್ಯಯದ ರೂಪದಲ್ಲಿ ಉಪಯೋಗಿಸುವ ವ್ಯಂಜನಗಳು ಅಧಿಕವಾಗಿ ಕಂಡುಬರುತ್ತವೆ. ಕೆಲವು ಮೂಲಧಾತುಗಳಿಗೆ ವಿವಿಧ ಪ್ರತ್ಯಯಗಳನ್ನು ಸೇರಿಸಿ ವಿವಿಧ ಅರ್ಥವನ್ನು ಪಡೆಯುವುದೂ ಸ್ವಲ್ಪ ಕಷ್ಟ. ಈ ದಕ್ಷಿಣ ಕಾಕೇಸಿಯನ್ ಭಾಷೆಗಳಲ್ಲೆಲ್ಲ ಜಾರ್ಜಿಯನ್ ಭಾಷೆ ಅತಿ ಪ್ರಾಚೀನವಾದುದು. ಇದರಲ್ಲಿ ಅತಿಪ್ರಾಚೀನ ಸಾಹಿತ್ಯ ದೊರೆಯುತ್ತದೆ. ಅಷ್ಟೇ ಅಲ್ಲದೆ, ಬಹು ಹಿಂದಿನಿಂದಲೂ ಲಿಪಿಯುಳ್ಳ ಭಾಷೆಯಾಗಿದು ಬೆಳೆದು ಬಂದಿದೆ. ಇತ್ತೇಚೆಗೆ ಕೆಲವು ಕಾಕೇಸಿಯನ್ ಭಾಷೆಗಳಲ್ಲಿ ಗ್ರಂಥಗಳು, ವೃತ್ತಪತ್ರಿಕೆಗಳು ಕಾಣಿಸಿಕೊಳ್ಳುತ್ತಿವೆ. ಉತ್ತರ ಕಾಕೇಸಿಯನ್ ಭಾಷೆಗಳನ್ನು ದಕ್ಷಣ ಕಾಕೇಸಿಯನ್ ಭಾಷೆಗಳೊಡನೆ ಹೋಲಿಸಿದಾಗ ಉತ್ತರ ವರ್ಗದ ಹೆಚ್ಚು ಭಾಷೆಗಳಿಗೆ ತಮ್ಮವೇ ಆದ ಲಿಪಿ ಹಾಗೂ ಸಾಹಿತ್ಯ ಇಲ್ಲವೆನ್ನಲಾಗಿದೆ. 

 

(ಕೆ.ಕೆ.ಜಿ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ